ಮನು -
ಇವರು ಹದಿನಾಲ್ಕು ಮಂದಿ. ಬ್ರಹ್ಮನ ಒಂದು ಹಗಲಿನಲ್ಲಿ ಈ ಹದಿನಾಲ್ಕು ಮಂದಿಯೂ ರಾಜ್ಯಭಾರ ಮಾಡುತ್ತಾರೆ. ಮನು ಎಂಬುದು ಇಂದ್ರನ ಹಾಗೆ ಪದವಿಯ ಹೆಸರೇ ಹೊರತು, ವ್ಯಕ್ತಿಯ ಹೆಸರಲ್ಲ. ಒಬ್ಬೊಬ್ಬ ಮನುವಿನ ರಾಜ್ಯಭಾರ ಕಾಲಕ್ಕೆ ಮನ್ವಂತರವೆಂದು ಹೆಸರು. (ನೋಡಿ- ಮನ್ವಂತರ)

	ಸ್ವಯಂಭೂ, ಸ್ವಾರೋಚಿಷ, ಉತ್ತಮ, ತಾಮಸ, ರೈವತ, ಚಾಕ್ಷುಷ ಎಂಬ ಆರು ಮಂದಿ ಮನುಗಳು ಆಗಿ ಹೋಗಿದ್ದಾರೆ. ಈಗ ಏಳನೆಯವನಾದ ವೈವಸ್ವತ ಮನು ರಾಜ್ಯಭಾರ ಮಾಡುತ್ತಿದ್ದಾನೆ. ಈ ಕಾರಣದಿಂದಲೇ ಈ ಮನ್ವಂತರಕ್ಕೆ ವೈವಸ್ವತ ಮನ್ವಂತರವೆಂದು ಹೆಸರು. ಈತನ ತರುವಾಯ ಸೂರ್ಯ ಸಾವರ್ಣಿ, ದಕ್ಷಸಾವರ್ಣಿ, ಬ್ರಹ್ಮಸಾವರ್ಣಿ, ಧರ್ಮಸಾವರ್ಣಿ, ರುದ್ರಸಾವರ್ಣಿ, ದೇವಸಾವರ್ಣಿ, ಇಂದ್ರ ಸಾವರ್ಣಿಗಳೆಂಬ ಏಳು ಮಂದಿ ಮನುಗಳು ಮುಂದೆ ರಾಜ್ಯಭಾರ ಮಾಡುವರು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ